ಎಡ್ಮಂಡ್ ಹ್ಯಾಲಿ ( 1656 - 1742) ಧೂಮಕೇತುಗಳನ್ನು ವಿವರವಾಗಿ ಅಭ್ಯಾಸ ಮಾಡಿ ಅವುಗಳ ಗಣೀತೀಯ ವೃತ್ತಾಂತ ಬರೆದಿಟ್ಟ. 1682ರಲ್ಲಿ ಪ್ರತ್ಯಕ್ಷವಾದ ಧೂಮಕೇತುವೊಂದರ (ಅದೇ ಪ್ರಖ್ಯಾತವಾದ ಹ್ಯಾಲಿ ಧೂಮಕೇತು) ಕಕ್ಷೆ 1531 ಮತ್ತು 1607ರಲ್ಲಿ ಕಾಣಿಸಿಕೊಂಡಿದ್ದ ಧೂಮಕೇತುಗಳ ಕಕ್ಷೆಗೆ ಯಥಾವತ್ತಾಗಿ ಹೋಲುವುದನ್ನು ಗಮನಿಸಿ, ಆ ಧೂಮಕೇತುಗಳು ಬೇರೆ ಬೇರೆಯಲ್ಲದೆ, ಒಂದೇ ಧೂಮಕೇತುವೆಂದು, ಆ ಧೂಮಕೇತು ಪ್ರತಿ 76 ವರ್ಷಗಳಿಗೊಮ್ಮೆ ಸೂರ್ಯನನ್ನು ಒಂದು ಸುತ್ತು ಬರುವುದೆಂದು, 1758ರ ಹೊತ್ತಿಗೆ ಆ ಧೂಮಕೇತು ಮತ್ತೆ ಕಾಣಿಸಿಕೊಳ್ಳುವುದೆಂದು ಬರೆದಿಟ್ಟ. ಆದರೆ 1758ರಲ್ಲಿ ಆ ಧೂಮಕೇತುವನ್ನು ನೋಡಲು ಹ್ಯಾಲಿ ಬದುಕಿರಲಿಲ್ಲ. ಹ್ಯಾಲಿ ಬರೆದಿಟ್ಟಂತೆ 1758ರಲ್ಲಿ ಕಾಣಿಸಿಕೊಳ್ಳಲಿದ್ದ ಧೂಮಕೇತುವನ್ನು ಹುಡುಕ ಹೊರಟವರಲ್ಲಿ ಚಾರ್ಲ್ಸ್ ಮೇಸಿಯೆ ( 1730 - 1817) ಎಂಬುವನೂ ಒಬ್ಬ. ಆ ಹುಡುಕಾಟದ ಸಂದರ್ಭದಲ್ಲಿ ಮೇಸಿಯೆ ಗುರುತಿಸಿದ, ನಕ್ಷತ್ರದಂತೆ ಚುಕ್ಕೆಯಲ್ಲದ, ಮಬ್ಬಾದ ಕಾಯಗಳು ಧೂಮಕೇತುಗಳೇ ಎಂಬಂತೆ ಭ್ರಮೆ ಹುಟ್ಟಿಸುತ್ತಿದ್ದವು. ಇಂಥಹ ಕಾಯಗಳ ಪಟ್ಟಿಯೊಂದನ್ನು ಮೇಸಿಯೆ ತಯಾರಿಸಿದ. ಆ ಪಟ್ಟಿಗೆ ಮೇಸಿಯೆ ಪಟ್ಟಿಯೆಂದು ( ) ಕರೆಯುತ್ತಾರೆ. ಇದರಲ್ಲಿನ ಪ್ರತಿ ಕಾಯಗಳಿಗೆ ಒಂದರಿಂದ ಸಂಖ್ಯೆಗಳನ್ನು ನೀಡಲಾಗಿದೆ. ಸಂಖ್ಯೆಯ ಮೊದಲು ಇಂಗ್ಲೀಷಿನ ಅಕ್ಷರವನ್ನು ಸೇರಿಸಲಾಗುತ್ತದೆ. ಎಂದರೆ ಮೇಸಿಯೆ. ಉದಾಹರಣೆಗಾಗಿ ಹೇಳಬೇಕಾದರೆ ಕ್ರಿ.ಶ.1054ರಲ್ಲಿ ಸ್ಪೋಟಿಸಿದ ಸೂಪರ್ನೋವಾದ ಉಳಿಕೆ ಕ್ರ್ಯಾಬ್ ನೆಬ್ಯೂಲಾ. ಇದು ಮೇಸಿಯೆ ಪಟ್ಟಿಯಲ್ಲಿನ ಮೊದಲ ಕಾಯ. ಇದನ್ನು M1 ಎಂದು ಗುರುತಿಸಲಾಗುತ್ತದೆ. ಪರಿಷ್ಕೃತ ಆವೃತ್ತಿಯಂತೆ ಈಗ ಒಟ್ಟು 110 ಕಾಯಗಳು ಮೇಸಿಯೆ ಪಟ್ಟಿಯಲ್ಲಿವೆ. ಡಾ|| ..ಶೈಲಜಾ, ಜವಹರಲಾಲ್ ನೆಹರೂ ತಾರಾಲಯ, ಬೆಂಗಳೂರು, ಇವರು 14 ಜನವರಿ, 2009ರಿಂದ ಮೇಸಿಯೆ ಪಟ್ಟಿಯ ಕಾಯಗಳ ಪರಿಚಯವನ್ನು ’ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರತಿ ಬುಧವಾರದ ’ವಿಜ್ಞಾನ-ತಂತ್ರಜ್ಞಾನ’ ಪುರವಣಿಯಲ್ಲಿ ಕನ್ನಡದಲ್ಲಿ ಪರಿಚಯ ಮಾಡಿಕೊಡುತ್ತಿದ್ದಾರೆ. == ಮೇಸಿಯೆ ಪಟ್ಟಿಯ ಆಕಾಶಕಾಯಗಳು ==